ಮತ್ತಷ್ಟು ಓದು

ದೇಶದಲ್ಲಿ ಹಲವಾರು ಸಮಸ್ಯೆಗಳು ಇದ್ದು,
ಸಮಸ್ಯೆಗಳ ಬಗ್ಗೆ ಕೇವಲ ಚರ್ಚೆಯಿಂದ
ಪರಿಹಾರ ಅಸಾಧ್ಯ.
ದೇಶ ಭಕ್ತರೇ ಒಂದಾಗಿ ಬದಲಾವಣೆಗಾಗಿ
ಕೈ ಜೋಡಿಸಿ.

ಮತ್ತಷ್ಟು ಓದು

ದೇಶದಲ್ಲಿ ಹಲವಾರು ಸಮಸ್ಯೆಗಳು ಇದ್ದು,
ಸಮಸ್ಯೆಗಳ ಬಗ್ಗೆ ಕೇವಲ ಚರ್ಚೆಯಿಂದ
ಪರಿಹಾರ ಅಸಾಧ್ಯ.
ದೇಶ ಭಕ್ತರೇ ಒಂದಾಗಿ ಬದಲಾವಣೆಗಾಗಿ
ಕೈ ಜೋಡಿಸಿ.

ಮತ್ತಷ್ಟು ಓದು

ವಿಚಾರ ಮತ್ತು ತತ್ವಸಿದ್ದಾಂತಕ್ಕಾಗಿ
ಒಂದಾಗಿ ಹೋರಾಟ ಮಾಡೋಣ
ಗೆದ್ದೆ ಗೆಲ್ಲುತ್ತೇವೆ
ಒಬ್ಬಂಟಿಯ ಹೋರಾಟ ಅಲ್ಲ
ಯುವಶಕ್ತಿಯ ಹೋರಾಟ

ಮತ್ತಷ್ಟು ಓದು

ವಿಚಾರ ಮತ್ತು ತತ್ವಸಿದ್ದಾಂತಕ್ಕಾಗಿ
ಒಂದಾಗಿ ಹೋರಾಟ ಮಾಡೋಣ
ಗೆದ್ದೆ ಗೆಲ್ಲುತ್ತೇವೆ
ಒಬ್ಬಂಟಿಯ ಹೋರಾಟ ಅಲ್ಲ
ಯುವಶಕ್ತಿಯ ಹೋರಾಟ

ಮತ್ತಷ್ಟು ಓದು

ಜ್ಞಾನ ಮತ್ತು ಮಾಹಿತಿಯಿಂದ ದೇಶದ ಜನ ಬದಲಾವಣೆ ಆಗಿ
ದೇಶದಲ್ಲಿ ದೇಶಾಭಿಮಾನ ಬೆಳೆದು ಬಲಿಷ್ಠ
ಭಾರತದ ಕನಸು ನನಸಾಗುತ್ತದೆ.
ಕನಸಿನ ಭಾರತ ಬದಲಾವಣೆಗಾಗಿ
ಒಂದು ಪ್ರಯತ್ನ

ಮತ್ತಷ್ಟು ಓದು

ಜ್ಞಾನ ಮತ್ತು ಮಾಹಿತಿಯಿಂದ ದೇಶದ ಜನ ಬದಲಾವಣೆ ಆಗಿ
ದೇಶದಲ್ಲಿ ದೇಶಾಭಿಮಾನ ಬೆಳೆದು ಬಲಿಷ್ಠ
ಭಾರತದ ಕನಸು ನನಸಾಗುತ್ತದೆ.
ಕನಸಿನ ಭಾರತ ಬದಲಾವಣೆಗಾಗಿ
ಒಂದು ಪ್ರಯತ್ನ

ಕನಸಿನ ಭಾರತ

ದಿನ, ವಾರ, ಪಾಕ್ಷಿಕ ಮತ್ತು ಮಾಸ ಪತ್ರಿಕೆ

ಕನಸಿನ ಭಾರತ ಟಿ.ವಿ

Web Portal and web tv

Tv23 ಕನ್ನಡ

ಸುದ್ಧಿ ವಾಹಿನಿ

ಕನಸಿನ ಭಾರತ ದೇಶದ ಪತ್ರಿಕಾರಂಗ ಇತಿಹಾಸದಲ್ಲಿ ವಿನೂತನ ಪ್ರಯತ್ನ ಇದಾಗಿದೆ. ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾದ ಮಾಧ್ಯಮದ ಮೂಲಕ ಜನಜಾಗೃತಿ, ದೇಶಾಭಿಮಾನ, ಭ್ರಷ್ಠಾಚಾರ ನಿರ್ಮೂಲನೆ, ಸಮಾನತೆಯ ಆಶೆಯಗಳೊಂದಿಗೆ ಕನಸಿನ ಭಾರತವು 2011 ರಿಂದ ನಿರಂತರ ಕಾರ್ಯ ನಿರ್ವಹಿಸುತ್ತಿದೆ. ಕನಸಿನ ಭಾರತವು ಸಮೂಹ ಸಂಸ್ಥೆಯಾಗಿದ್ದು,ಇಲ್ಲಿ ಯಾರು ಕೆಲಸಗಾರರು ಇರುವುದಿಲ್ಲ. ಈ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುವ ಪ್ರತಿಯೊಬ್ಬರು ಪಾಲುದಾರರು. ಈ ಸಂಸ್ಥೆಯಲ್ಲಿ ಭಾಗವಹಿಸುವವರು ತಮ್ಮ ಜ್ಞಾನ, ಹೊಸ ಪ್ರಯೋಗ ಅಥವಾ ದೇಶದ ಕನಸನ್ನು ನನಸಾಗಿಸಲು ವೇದಿಕೆ ಇದಾಗಿದೆ. ಬಲಿಷ್ಠ ಭಾರತ ಕಟ್ಟಲು ದೇಶಾಭಿಮಾನ ಮತ್ತು ಜನಜಾಗೃತಿಯಿಂದ ಮಾತ್ರ ಸಾಧ್ಯ ಈ ದಿಶೆಯಲ್ಲಿ ಯುವ ಸಮುದಾಯದ ಬೆಂಬಲದೊಂದಿಗೆ ಬದಲಾವಣೆಗಾಗಿ ಈ ಪ್ರಯತ್ನ. ಕನಸಿನ ಭಾರತ (ಮಾಸ/ಪಾಕ್ಷಿಕ/ವಾರ ) ಪತ್ರಿಕೆಗಳು ನಡೆಯುತ್ತಿದ್ದು, ಸದ್ಯದಲ್ಲೇ ದಿನ ಪತ್ರಿಕೆ ಪ್ರಾರಂಭಿಸಲಾಗುವುದು. Online news portal ಜೊತೆಗೆ Web Tv ಪ್ರಾರಂಭಿಸಲಾಗಿದೆ. ಸುದ್ಧಿಯನ್ನು ಆಳುವವರಿಂದ ಜನರಿಗೆ ಮತ್ತು ಜನ ಸಾಮಾನ್ಯರ ನೋವು ನಲಿವುಗಳ ಕಷ್ಟಗಳ ಸುದ್ಧಿಯನ್ನು ಆಳುವವರಿಗೆ ತಲುಪಿಸುವ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ವಿಷಯ- ವಿಚಾರಗಳ ವಿಶ್ಲೇಷಣೆ, ಪ್ರತಿಭೆಗಳನ್ನು ನಾಡಿಗೆ ಪರಿಚಯಿಸುವ ಮೂಲಕ ನಾಡಿನ ಪ್ರತಿಭೆಗಳನ್ನು ಅನಾವರಣ ಮಾಡಲಾಗುತ್ತದೆ.ಮಾಹಿತಿ, ಜಾಗೃತಿ ಮತ್ತು ದೇಶಾಭಿಮಾನ ಬೆಳೆಸುವ ದೊಡ್ಡ ಜವಾಬ್ದಾರಿ ಇಂದಿನ ಸಂದರ್ಭದಲ್ಲಿ ಇದ್ದು, ಮಾಧ್ಯಮದ ಮೂಲಕ ನವ ವಿಚಾರವಂತರಿಗೆ ಅವಕಾಶ, ಮಾನಸಿಕ ಭಯೋತ್ಪಾದನೆಯನ್ನು ತಡೆದು ಜನರಿಗೆ ನೆಮ್ಮದಿ ಮತ್ತು ಸಮಾನತೆಯ ಜೀವನ ಕಟ್ಟಲು ನಮ್ಮದೊಂದು ಪ್ರಯತ್ನ.ಕರ್ನಾಟಕದ ಎಲ್ಲ ಜಿಲ್ಲೆಗಳಲ್ಲೂ ಪತ್ರಿಕೆ ತನ್ನದೆ ಛಾಪು ಬೀರುತ್ತಿದೆ.ಕಾನೂನು ಪ್ರಕಾರ ಕನಸಿನ ಭಾರತ REGISTRAR OF NEWSPAPERS FOR INDIA (Government of India) ಮಾಸ  ( KARKAN/2011/45279 ) ಪಾಕ್ಷಿಕ ( KARKAN26141 ) ವಾರ ( KARKAN/2017/73352 ) ಮತ್ತು ದಿನ ( KARKAN/2015/66206 ) ನೋಂದಾವಣೆ ಆಗಿದ್ದು, ಕಾನೂನು ರೀತ್ಯ ಎಲ್ಲ ಹಂತಗಳನ್ನು ಪೂರೈಸುತ್ತಾ ಬಂದಿದೆ. ಕನಸಿನ ಭಾರತದಲ್ಲಿ ಕಾರ್ಯನಿರ್ವಹಿಸುವವರನ್ನು ಕಾನೂನು ರೀತ್ಯ ಪಾಲುದಾರನಾಗಿಸಲು 2019 ರಲ್ಲಿ Kanasina Bharatha Media LLP ನೋಂದಾವಣೆ ಮಾಡಿದ್ದು, ಪ್ರಯತ್ನ ಮತ್ತು ಭಾಗವಹಿಸುವ ಹಂತವನ್ನು ನೋಡಿ 2 ವರ್ಷದ ಒಳಗಾಗಿ ಪಾಲುದಾರರ ಹಂಚಿಕೆ ಪೂರ್ಣಗೊಳಿಸಲಾಗುವುದು. ನಮ್ಮ ಟೀಮ್ ಆರ್ಥಿಕ ಅಭಿವೃದ್ಧಿ ಮತ್ತು ಪೂರ್ಣ ಅವಧಿಗೆ ಕೆಲಸ ಮಾಡಲು ಬೇರೆ ಪತ್ರಿಕೆ/ಟಿ.ವಿ ಚಾನಲ್ ಜಾಹೀರಾತು, ಬಸ್ ಜಾಹೀರಾತು, ಚಿತ್ರಮಂದಿರದಲ್ಲಿ ಜಾಹೀರಾತು ಇನ್ನು ಮುಂತಾದವುಗಳನ್ನು ಕಂಪನಿ ಮೂಲಕ ಮಾಡಲಾಗುತ್ತದೆ ಅದರ ಬಗ್ಗೆ ಹೆಚ್ಚಿನ ಮಾಹಿತಿಗಾಗಿ KANASINA BHARATHA Pvt.Ltd ನೋಡಿ. ಸಮಾಜದ ಅಭ್ಯುದಯ ಮತ್ತು ನಿರುದ್ಯೋಗಿಗಳಿಗೆ ಉದ್ಯೋಗ ಭದ್ರತೆ, ಸಾಮಾಜಿಕ ಸಮಾನತೆ, ಆರ್ಥಿಕ ಸಮಾನತೆ ಮುಂತಾದ ಕನಸುಗಳ ಸಾಗರ. ಇಂತಹ ಹಲವಾರು ದೃಷ್ಟಿಕೋನದ ಈ ಸಮೂಹದಲ್ಲಿ ತಾವು ಭಾಗವಹಿಸಿ ಈ ಪ್ರಯತ್ನಕ್ಕೆ ತಮ್ಮ ಬೆಂಬಲದೊಂದಿಗೆ ಭವ್ಯ ಭಾರತದ ಕನಸು ನನಸಾಗಿಸಿ.

ಅಜೀವ ಸದಸ್ಯತ್ವ : ಕನಸಿನ ಭಾರತ ಪತ್ರಿಕೆಯಲ್ಲಿ ಸುದ್ಧಿ, ಲೇಖನಗಳ ಜೊತೆಗೆ ವಿಶ್ಲೇಷಣೆ ಆಸಕ್ತ ಓದುಗರಿಗೆ ಹಲವಾರು ಮೂಲಗಳಿಂದ ತಲುಪಿಸಲಾಗುತ್ತದೆ. ಕನಸಿನ ಭಾರತ ಮಾಸ ಪತ್ರಿಕೆಯು ದೇಶಾಭಿಮಾನ, ಭಾಷಾಭಿಮಾನ, ಇತಿಹಾಸ, ಸಂಸ್ಕøತಿ, ಕೃಷಿ, ಆಧ್ಯಾತ್ಮ, ಕಾನೂನು, ರಾಜಕೀಯ ಮಹಿಳಾ ಚಿಂತನೆಗಳು, ವೈಜ್ಞಾನಿಕ, ಶಿಕ್ಷಣ,ವ್ಯಾಪಾರ, ವ್ಯವಹಾರ,ಚಲನಚಿತ್ರ ಮತ್ತು ಕ್ರೀಡೆ ಇಂತಹ ಹಲವಾರು ವಿಶೇಷಗಳ ಬೃಹತ ಆಗರ, ಇಂತಹ ಮಾಸ ಪತ್ರಿಕೆಯನ್ನು ಜೀವನ ಪರ್ಯಂತ ಓದಲು ಮತ್ತು ಸಂಗ್ರಹ ಯೋಗ್ಯ ಮಾಹಿತಿ, ಆಧಾರದ ಈ ಪತ್ರಿಕೆಗೆ ಚಂದಾದಾರ ಆಗುವ ಮೂಲಕ ಸಮಾಜಸೇವೆ ಮಾಡಬಹುದು.

ಕನಸಿನ ಭಾರತ ಮಾಸ – 6150:: ಒಂದು ಸಾರಿ 6150 ಹಣ ನೀಡಿ ಕನಸಿನ ಭಾರತ ಮಾಸ ಪತ್ರಿಕೆಯ ಸದಸ್ಯತ್ವ ಪಡೆದರೆ, ಜೀವನ ಪರ್ಯಂತ ಪತ್ರಿಕೆ ಮನೆ ಬಾಗಿಲಿಗೆ ಅಂಚೆ/ಕೊರಿಯರ್/ನೇರವಾಗಿ ತಲುಪುತ್ತದೆ. ಅದ್ಬುತವಾದ ವಿಚಾರಗಳ ತಿಳಿದುಕೊಳ್ಳುವ ಮೂಲಕ ಜ್ಞಾನದಾಹ ತೀರಿಸಿಕೊಳ್ಳಬಹುದು. ಈ ಯೋಜನೆಯು ಸದ್ಯ ಕರ್ನಾಟಕ ರಾಜ್ಯದ 16,000 ಜನರಿಗೆ ಮಾತ್ರ ದೊರೆಯುತ್ತದೆ.

16000 ಜನರ 6150 ಹಣವನ್ನು ಬ್ಯಾಂಕಿನಲ್ಲಿ ಎಫ್.ಡಿ ಇಟ್ಟು ಅದರಿಂದ ಬರುವ ಲಾಭದಲ್ಲಿ ಪತ್ರಿಕೆ ಪ್ರಕಟಣೆ,ಓದುಗರಿಗೆ ತಲುಪಿಸುವುದ ಜೊತೆಗೆ ಪ್ರತಿ ವರ್ಷ ಒಂದು ಸಾರಿ ಇಬ್ಬರು ಸೈನಿಕರು ಮತ್ತು ಮೂವರು ರೈತರಿಗೆ ತಲಾ 25,000 ಗೌರವ ಹಣದೊಂದಿಗೆ ಸನ್ಮಾನಿಸಲಾಗುವುದು. ಸೈನಿಕರ ದೇಶ ಸೇವೆ ಮತ್ತು ರೈತರ ಶ್ರಮವನ್ನು ಆಧುನಿಕ ಜಗತ್ತಿನ ಯುವ ಪೀಳಿಗೆಗೆ ಪರಿಚಯಿಸುವ ಒಂದು ಪ್ರಯತ್ನ. ಅದು ಈ ಕಾರ್ಯಕ್ರಮವನ್ನು ರಾಜ್ಯದ ಹಳ್ಳಿ ಆಯೋಜನೆ ಮಾಡಿ ನಮ್ಮ ಹಳ್ಳಿಗಳ ಪರಿಸ್ಥಿತಿ ಮತ್ತು ಸಂಸ್ಕøತಿಯನ್ನು ನಾಡಿಗೆ ಪರಿಚಯಿಸುವ ವಿನೂತನ ಪ್ರಯತ್ನ. ಸೈನಿಕರು ಮತ್ತು ರೈತರು ನಮ್ಮ ಎರಡು ಕಣ್ಣುಗಳಿದಂತೆ ಪ್ರೋತ್ಸಾಹ, ದೇಶಾಭಿಮಾನ ಮೂಡಿಸುವ ಪ್ರಾಮಾಣಿಕ ಪ್ರಯತ್ನ. ರಾಜ್ಯದ ಯಾವುದೇ ಸೈನಿಕರಿಗೆ ಗಡಿಯಲ್ಲಿ ತೊಂದರೆ ಆದಾಗ ತುರ್ತು ಸಹಾಯ ಮಾಡಲಾಗುವುದು ಅದು ಗರಿಷ್ಠ 50,000 ವರೆಗೆ ಸಹಾಯ ಮಾಡುವ ಜೊತೆಗೆ ಅಂತಹ ವಿಪತ್ತು ಸಮಯದಲ್ಲಿ ಕುಟುಂಬದ ನೆರವಿಗೆ ನಿಲ್ಲುವುದು. ಜ್ಞಾನದಾಹ ನಿಗಿಸುವ ಪತ್ರಿಕೆ ಜೊತೆಗೆ ದೇಶಾಭಿಮಾನದ ಸಮಾಜ ಸೇವೆಗೆ ತಮ್ಮ ಸಹಾಯ ಮಾಡಿ.


ಚಂದಾದಾರರಿಗೆ ಲಾಭಗಳು
  1. ಜೀವನ ಪರ್ಯಂತ ಮಾಸ ಪತ್ರಿಕೆ ದೊರೆಯುತ್ತದೆ.
  2. ವರ್ಷದಲ್ಲಿ ಒಂದು ಬಾರಿ ತಮ್ಮ ಅಥವಾ ತಾವು ಸೂಚಿಸಿದವರ ಹುಟ್ಟು ಹಬ್ಬ ಅಥವಾ ಮದುವೆ ವಾರ್ಷಿಕೋತ್ಸವದ ಶುಭಾಷಗಳನ್ನು ಪತ್ರಿಕೆಯ ವತಿಯಿಂದ ಉಚಿತವಾಗಿ ಪ್ರಕಟಿಸಲಾಗುವುದು.
  3. ಚಂದಾದಾರರ ಜಾಹೀರಾತುಗಳ ಮೇಲೆ ಶೇ. 30ರಷ್ಟು ರಿಯಾಯಿತಿ ನೀಡಲಾಗುವುದು.
  4. ವಾರ್ಷಿಕ ಪ್ರಶಸ್ತಿ ಕಾರ್ಯಕ್ರಮಕ್ಕೆ ವಿಶೇಷವಾಗಿ ಆಹ್ವಾನಿಸಲಾಗುವುದು.

ವಾರ್ಷಿಕ ಚಂದಾ :

ಕನಸಿನ ಭಾರತ ಪತ್ರಿಕೆಯ ಮೂಲಕ ಜನ ಜಾಗೃತಿ ಮತ್ತು ಮಾಹಿತಿ ಸುದ್ಧಿಗಳನ್ನು ತಲುಪಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇವೆ. ಈ ಆಧುನಿಕ ಯುಗದಲ್ಲಿ ಓದುವ ಹವ್ಯಾಸಗಳು ಕಡಿಮೆ ಆಗುತ್ತಿದ್ದು, ಮೊಬೈಲ್ ಮತ್ತು ಟಿ.ವಿ ನೋಡುವ ಚಟಗಳಿಂದ ಮಾನವನ ಆರೋಗ್ಯದ ಮೇಲೆ ಹಲವಾರು ಕೆಟ್ಟ ಪರಿಣಾಮಗಳು ಆಗುತ್ತವೆ. ಓದುವುದರಿಂದ ಸುದ್ಧಿಯ ಆಳ-ಅಗಲ ಮತ್ತು ವಿಚಾರಗಳನ್ನು ತುಂಬ ಸರಳವಾಗಿ ಮತ್ತು ಸತ್ಯದ ಪರಿದಕ್ಷತೆಯಲ್ಲಿ ತಿಳಿದುಕೊಳ್ಳಬಹುದು. ಪತ್ರಿಕೆಗಳನ್ನು ಓದುವುದರಿಂದ ನೆನಪಿನ ಶಕ್ತಿ ಹೆಚ್ಚಾಗುವ ಮೂಲಕ ಮಾನವನ ಆರೋಗ್ಯ ಮೇಲೆ ಹಲವಾರು ಉತ್ತಮ ಪರಿಣಾಮಗಳು ಬೀರುತ್ತವೆ.ಕನಸಿನ ಭಾರತವು ಉತ್ತಮ ಸಮಾಜಕ್ಕಾಗಿ ಮತ್ತು ಸತ್ಯದ ಪ್ರತಿದ್ವನಿಯಾಗಿ,ವಿಚಾರ ಲೇಖನ ಮತ್ತು ಸುದ್ದಿಗಳನ್ನು ನೀಡುತ್ತದೆ. ವಾರ್ಷಿಕ ಚಂದಾ ಹಣವು ರೂ.500 ಆಗಿದ್ದು, ಕನಸಿನ ಭಾರತ ಬಗ್ಗೆ ಗೂಗಲನಲ್ಲಿ ನೋಡಿ ತಿಳಿದುಕೊಂಡು ವಾರ್ಷಿಕ ಚಂದಾದಾರ ಆಗುವ ಮೂಲಕ ಪತ್ರಿಕೆಯ ಬೆಳವಣೆಗೆಗೆ ಸಹಕರಿಸುವ ಜೊತೆಗೆ ತಮ್ಮ ಸುದ್ಧಿ ಮತ್ತು ಲೇಖನ ಓದುವ ಆಶೆ ಜೊತೆಗೆ ಜ್ಞಾನವನ್ನು ವೃದ್ಧಿಸಿಕೊಳ್ಳಬೇಕು. ಕನಸಿನ ಭಾರತ ಪತ್ರಿಕೆಯು ಕುಟುಂಬದ ಎಲ್ಲಾ ವಯೋಮಾನದ ಸದಸ್ಯರು ಓದುವತ್ತಿದ್ದು, ಚರಿತ್ರೆ,ಉದ್ಯೋಗ,ಕಾನೂನು,ಮಹಿಳೆ,ಕೃಷಿ, ವಿಜ್ಞಾನ, ಮನರಂಜನೆ,ರಾಜಕೀಯ,ಸಾಮಾಜಿಕ,ಶಿಕ್ಷಣ ಮತ್ತು ಅಡುಗೆ ಸೇರಿದಂತೆ ಹಲವಾರು ವಿಷಯಗಳ ಕುರಿತು ನಾಡಿನ ಪ್ರಸಿದ್ದ ಬರಹಗಾರರ ಲೇಖನಗಳನ್ನು ಚಿಕ್ಕದಾಗಿ,ಚೊಕ್ಕದಾಗಿ ಪ್ರಕಟಿಸಿ,ನಿಮ್ಮ ಓದುವ ಆಸಕ್ತಿಯನ್ನು ಇನ್ನಷ್ಟು ಹೆಚ್ಚಿಸಲಾಗುತ್ತದೆ.

ವಾರ್ಷಿಕ ಚಂದಾ : 500 ರೂಪಾಯಿ ಮಾತ್ರ

ನಮ್ಮೊಂದಿಗೆ ನೀವು. ಕನಸಿನ ಭಾರತ ಅನ್ನು ದೇಶಾಭಿಮಾನವುಳ್ಳ ಯುವ ಪಡೆ ಕಟ್ಟಿ ಬೆಳೆಸುತ್ತಿದೆ, ದೇಶಾಭಿಮಾನ, ಭಾರತ ಭವಿಷ್ಯದ ಕನಸು ಕಾಣುವ ಪ್ರತಿಯೊಬ್ಬರು ಈ ವ್ಯವಸ್ಥೆಯಲ್ಲಿ ಭಾಗಿ ಆಗಬಹುದು. ನಮ್ಮಲ್ಲಿ ತಾವು ವರದಿಗಾರರಾಗಿ, ಮಾಹಿತಿ ನೀಡುವವರಾಗಿ, ಲೇಖನ,ಕಥೆ,ಕವನ,ಪರಿಚಯದಂತಹ ಬರಹಗಳನ್ನು ಮತ್ತು ಸ್ಥಳೀಯ ಸಮಸ್ಯೆಗಳು ಮತ್ತು ಸ್ಥಳೀಯ ವಿಶೇಷತೆಗಳ ಕುರಿತ ಸುದ್ಧಿ/ಲೇಖನಗಳನ್ನು ಬರೆಯಬಹುದು. ಪತ್ರಿಕೆಯ ವಾರ್ಷಿಕ ಚಂದಾ/ ಅಜೀವ ಸದಸ್ಯತ್ವ ಅಥವಾ ಪೋಷಕರು ಗೌರವ ಪೋಷಕರು ಆಗಬಹುದು. ಕನಸಿನ ಭಾರತ ಸಮೂಹದಲ್ಲಿ ವರದಿಗಾರರು, ಬೇರೆ-ಬೇರೆ ವಿಭಾಗದಲ್ಲಿ ಕೆಲಸ ಮಾಡುವ ಎಲ್ಲರೂ ಪಾಲುದಾರರಾಗಿರುತ್ತಾರೆ. ತಾವು ಕೂಡ ತಮ್ಮ ಬಿಡುವಿನ ಸಮಯದಲ್ಲಿ ಪತ್ರಿಕೆಯ ಕೆಲಸ ಮಾಡಬಹುದು. ದುಡಿಮೆಗೆ ತಕ್ಕ ಪ್ರತಿಫಲ ಜೊತೆಗೆ ದೇಶಾಭಿಮಾನ ಬೆಳೆಸುವ ಪ್ರಯತ್ನದಲ್ಲಿ ತಮ್ಮ ಸೇವೆಯೂ ಸೇರುತ್ತದೆ. ಬನ್ನಿ ಸೇರಿ, ಬಲಿಷ್ಠ ಭಾರತ ಕಟ್ಟಲು ಪ್ರತಿಯೊಬ್ಬರು ಕೈ ಜೋಡಿಸಿ.ಎಲ್ಲ ಹಂತದಲ್ಲೂ ನಮ್ಮೊಂದಿಗೆ ಕೈ ಜೋಡಿಸುವವರ ಸಲಹೆ ಸೂಚನೆಗಳನ್ನು ಮುಕ್ತ ಮನಸ್ಸಿನಿಂದ ನಾವು ಪಡೆಯುತ್ತೇವೆ.
ನಮ್ಮ ಟೀಮ್ ಅಥವಾ ಸಾರ್ವಜನಿಕರ ಗಮನಕ್ಕೆ

  1. ಪತ್ರಿಕೆ ಐ.ಡಿ ಕಾರ್ಡ್ ಕೇವಲ ನಿಮ್ಮ ಗುರುತಿಗಾಗಿ ಹೊರತು ದಬ್ಬಾಳಿಕೆ ಮಾಡಲು ಅಲ್ಲ. ಉತ್ತಮ ಕ್ರಿಯಾಶೀಲ ಪತ್ರಕರ್ತನಿಗೆ ಸೌಜನ್ಯತೆ ತಾಳ್ಮೆ ಅವಶ್ಯಕ. ನಾವು ಅದನ್ನು ತಮ್ಮಿಂದ ಬಯಸುತ್ತೇವೆ.ಯಾವುದೇ ನಮ್ಮ ವರದಿಗಾರರು ತಮ್ಮ ಹುದ್ದೆ ಅಥವಾ ಐ.ಡಿ ಕಾರ್ಡ್ ದುರುಪಯೋಗ ಪಡೆಸಿಕೊಳ್ಳುವುದು ಸಾರ್ವಜನಿಕರಿಗೆ ಕಂಡು ಬಂದರೆ ತಕ್ಷಣ 9916963121 ಸಂಪರ್ಕಿಸಿ.
  2. ಪತ್ರಿಕೆ ಹೆಸರಿನಲ್ಲಿ ಹಣ ವಸೂಲಿ ಮಾಡುವುದು ಅಧಿಕಾರಿಗಳು/ಸಾರ್ವಜನಿಕರನ್ನು ಹೆದರಿಸುವುದು ಕಂಡು ಬಂದರೆ ಯಾವುದೇ ಮುನ್ನಸೂಚನೆ ಇಲ್ಲದೆ ಹುದ್ದೆಯಿಂದ ತೆಗೆದು ಹಾಕಲಾಗುವುದು.
  3. ವರದಿಗಾರರು ಯಾವುದೇ ಸಂದರ್ಭದಲ್ಲೂ ಆಪೀಸಿನಿಂದ ಬರುವ ಕರೆಗಳನ್ನು ಸ್ವೀಕರಿಸಬೇಕು. ಮುಖ್ಯಸ್ಥರ ಆಜ್ಞೆಗಳನ್ನು ಪಾಲಿಸಬೇಕು.ಹೇಳುವ ಕೆಲಸಗಳನ್ನು ಮಾಡಲೇಬೇಕು.
  4. ಪುಲ್/ಪಾರ್ಟ್ ಟೈಮ್ ಯಾವುದೇ ವರದಿಗಾರರು ಕನಿಷ್ಠ ಜಾಹೀರಾತು ಪತ್ರಿಕೆ ಚಂದದಾರರನ್ನು ಮಾಡಿಸುವುದು ಮತ್ತು ವರದಿ ಕಳಿಸುವುದು ಕಡ್ಡಾಯವಾಗಿರುತ್ತದೆ.
  5. ಪತ್ರಿಕೆಯ ಸಭೆಗಳಿಗೆ ಕಡ್ಡಾಯವಾಗಿ ಹಾಜರಾಗಬೇಕು.
  6. ಹೊಸ ವರದಿಗಾರರಾಗಲು, ಪತ್ರಿಕೆ ಕಳಿಸುವುದು,ಸುದ್ಧಿ, ಜಾಹೀರಾತು, ಐ.ಡಿ ಕಾರ್ಡ್, ವಿ.ಸಿ ಬಗ್ಗೆ ಏನಾದರೂ ಮಾಹಿತಿ ಬೇಕಾದರೆ ಶ್ರೀ ಗಂಗಾಧರ್ 9148820080 (24X7) 08023100700/08023307404 ಸಂಪರ್ಕಿಸಿ.
  7. ಕಾನೂನು, ವಿಶೇಷ ಸುದ್ಧಿ, ನಮ್ಮ ವರದಿಗಾರರ ಬಗ್ಗೆ ಅಥವಾ ಆಪೀಸು ಸಂಬಂಧಿಸಿದಂತೆ ಚರ್ಚಿಸಲು ಸಂಪಾದಕರು 9916963121 (ಬೆಳಗ್ಗೆ 9.00ರಿಂದ ಸಂಜೆ 6.00 ವರೆಗೆ)
  8. ಜಾಹೀರಾತು ಹಣ/ ಚಂದಾ ಹಣವನ್ನು ಕನಸಿನ ಭಾರತ ಹೆಸರಿನಲ್ಲಿ ಡಿ.ಡಿ.ಅಥವಾ ಚೆಕ್ ಪಡೆಯಬೇಕು. ಯಾವುದೇ ವರದಿಗಾರರು ತಮ್ಮ ಹೆಸರಿನಲ್ಲಿ ಪಡೆಯುವುದನ್ನು ನಿಷೇಧಿಸಲಾಗಿದೆ.ಸಾರ್ವಜನಿಕರು ಹಣ ನೀಡಿದರೇ ಕಡ್ಡಾಯವಾಗಿ ರಶೀದಿ ಪಡೆಯಬೇಕು, ಡಿ.ಡಿ ಅಥವಾ ಚೆಕ್ ಅನ್ನು ಕನಸಿನ ಭಾರತ ಹೆಸರಿನಲ್ಲಿ ನೀಡಬೇಕು.

ಜಾಹೀರಾತು/ಚಂದಾ ಹಣವಾಗಿ ಬಂದರೇ
PhonePe / Google Pay 9916963121 ಅಥವಾ

KANASINA BHARATHA 

STATE BANK OF INDIA                                                                                  

A/c no. 40078901279                                                            

IFSC CODE: SBIN0040323                                           

Branch :Rajajinagar  4th Branch 

ಖಾತೆಗಳಿಗೆ ಮಾತ್ರ ಸಂದಾಯ ಮಾಡಬೇಕು. ಬೇರೆ ಖಾತೆಗಳಿಗೆ ಜಮಾ ಮಾಡಿದ ಹಣಕ್ಕೆ ಕಂಪನಿ ಜವಾಬ್ದಾರಿ ಆಗುವುದಿಲ್ಲ.
10) ಸುದ್ಧಿ, ಲೇಖನ,ಕವನ, ಕಥೆ ಇನ್ನಿತರ ಬರಹಗಳನ್ನು ಕಡ್ಡಾಯವಾಗಿ- ಆನ್ ಲೈನ್‍ದಲ್ಲಿ ಪ್ರಕಟಿಸಲು WhatsApp no.9343996622 ಅಥವಾ e-mail kanasinabharath@gmail.com ಕಳಿಸಬೇಕು. ಪತ್ರಿಕೆಯಲ್ಲಿ ಪ್ರಕಟಣೆ ಮಾಡಲು WhatsApp no.9343996611 ಅಥವಾ e-mail kanasinabharath@gmail.com ಕಳಿಸಬೇಕು. ಬೇರೆ ಮೇಲ್ ಅಥವಾ ವಾಟ್ಸ್‍ಆಫ್‍ಗಳಿಗೆ ಕಳಿಸಲೇಬೇಡಿ.
11) ಚಂದಾ ಮತ್ತು ಜಾಹೀರಾತು ನೀಡುವವರಿಗೆ ಕಡ್ಡಾಯವಾಗಿ ರಶೀದಿ ನೀಡಲೇಬೇಕು/ಪಡೆಯಬೇಕು.
12) ಯಾವುದೇ ವಿಚಾರದಲ್ಲೂ ಸಂಪಾದಕರ ತಿರ್ಮಾಣವೇ ಅಂತಿಮ.

TV23 KANNADA 

TV23 KANNADA  ವರದಿಗಾರರು ಕಡ್ಡಾಯವಾಗಿ ಈ ಕೆಳಗಿನ ನಿಯಮಗಳನ್ನು ಪಾಲಿಸಲೇಬೇಕು.

  1. 1. TV23 KANNADA ವೆಬ್ ಸೈಟ್‌ಗೆ ಕಳುಹಿಸುವ ವೀಡಿಯೋ ಸುದ್ದಿಗಳನ್ನು ವಾಟ್ಸಪ್ ನಂಬರ್ 9343996611 ಅಥವಾ tv23kannada@gmail.com ಗೆ ಮಾತ್ರ ಕಳುಹಿಸಬೇಕು.
  2. 2. ಸುದ್ದಿಯನ್ನು ಬರೆಯುವಾಗ ಹೆಡ್ ಲೈನ್ ಮತ್ತು ಸುದ್ದಿ ವಿವರಣೆಯ ಜೊತೆಗೆ ಸಂಬOಧಿಸಿದ ವೀಡಿಯೋ ಇರಬೇಕು.
  3. 3. ಸುದ್ದಿಯನ್ನು ಸಂಜೆ ಐದು ಗಂಟೆಯ ಒಳಗಾಗಿ ಕಳುಹಿಸಬೇಕು.
  4. 4. ತನಿಖಾ ಸುದ್ದಿಗಳು (Investigative news) ಮಾಡಬೇಕಾದರೆ ಸಂಪಾದಕರ ಪೂರ್ವಾನುಮತಿ ಪಡೆಯಬೇಕು.
  5. 5. ದಿನಕ್ಕೆ ಒಂದು ಅಥವಾ ತಿಂಗಳಿಗೆ 20 ಆದರೂ ಸುದ್ದಿಗಳನ್ನು ಕಳುಹಿಸಬೇಕು.
  6. 6. ಸುದ್ದಿಯ ಜೊತೆಗೆ ಜಾಹೀರಾತು ಮಾಡಿಸುವುದು ಕಡ್ಡಾಯವಾಗಿರುತ್ತದೆ.
  7. 7. ಚಾನಲ್, ಮಾಹಿತಿ ಇತ್ಯಾದಿಗಳಿಗಾಗಿ 080-23307404 ಸಂಖ್ಯೆಗೆ ಬೆಳಗ್ಗೆ 00 ಗಂಟೆಯಿOದ ಸಂಜೆ 5:30ರ ವರೆಗೆ ಕರೆ ಮಾಡಿ ಮಾಹಿತಿ ಪಡೆಯಬಹುದು.
  8. 8. ಜಾಹೀರಾತು ಇತ್ಯಾದಿಗಳ ಬಗ್ಗೆ ಮ್ಯಾನೇಜರ್ 9148820080 ನಂಬರ್‌ಗೆ ಕರೆ ಮಾಡಿ ಚರ್ಚಿಸಬಹುದು.
  9. 9. ಸುದ್ದಿ ಮಾಡುವ ಕುರಿತು ತನಿಖಾ ಸುದ್ದಿಗಳು, ಕಾನೂನು ಸಮಸ್ಯೆಗಳು, ಸುದ್ದಿ ಮಾಡುವಾಗ ಆಗುವ ಸಮಸ್ಯೆಗಳು, ಅಧಿಕಾರಿಗಳು ಅಥವಾ ರಾಜಕಾರಣಿಗಳು ಮತ್ತು ಪ್ರಭಾವಿಗಳ ಜೊತೆ ಮಾತನಾಡಬೇಕಾದ ಸಂದರ್ಭದಲ್ಲಿ, ಇತ್ಯಾದಿ ವಿಷಯಗಳಿಗೆ ಸಂಬOಧಿಸಿದOತೆ ಸಂಪಾದಕರ ದೂರವಾಣಿ 9916963121 ನಂಬರ್‌ಗೆ ಕರೆ ಮಾಡುವುದು.
  10. 10. ಕನಸಿನ ಭಾರತ ಪ್ರೈ.ಲಿ. ಮಾಧ್ಯಮ ಸಂಸ್ಥೆಯಾಗಿದ್ದು ಬೇರೆ ಯಾವುದೇ ರೀತಿಯ ವ್ಯವಹಾರ ನಡೆಸುವುದಿಲ್ಲ. ವರದಿಗಾರರು ಪರಸ್ಪರ ನಡೆಸುವ ವ್ಯವಹಾರ, ಮಾತುಕತೆ, ಒಪ್ಪಂದಗಳಿಗೆ ಕಂಪನಿ ಜವಾಬ್ದಾರಿಯಾಗುವುದಿಲ,್ಲ ಇಂತಹ ಅನುಮಾನಗಳು ನಕಲಿ ಪತ್ರಕರ್ತರು ಮತ್ತು ಮಾಜಿ ಪತ್ರಕರ್ತರ ಬಗ್ಗೆ 9353020720 ನಂಬರ್ ಗೆ ಕರೆ ಮಾಡಿ ದೂರು ನೀಡಬಹುದು. ಜೊತೆಗೆ ವರದಿಗಾರರು ಜಾಗರೂಕರಾಗಿರಬೇಕು.
  11. 11. TV23 KANNADA ಗೆ ಬರುವ ಜಾಹೀರಾತು ಹಣ, ಸದಸ್ಯತ್ವದ ಹಣ ಇತ್ಯಾದಿ ಹಣವನ್ನು ನೇರವಾಗಿ ಫೋನ್ ಪೇ ಅಥವಾ ಗೂಗಲ್ ಪೇ ಸೇರಿದಂತೆ ಯಾವುದೇ UPI ಪೇಮೆಂಟ್ ಅನ್ನು 9916963121 ನಂಬರ್ ಗೆ ಮಾತ್ರ ಮಾಡಬೇಕು. ಸಂದಾಯವಾದ ಸ್ಕ್ರೀನ್ ಶಾಟ್ ಅನ್ನು 9353020720 ನಂಬರ್‌ಗೆ ಕಳುಹಿಸಬೇಕು. ಯಾವುದೇ ಚೆಕ್ ಅಥವಾ ಡಿಡಿ ಯನ್ನು “TV23 KANNADA”  ಹೆಸರಿಗೆ ಮಾತ್ರ ಪಡೆಯಬೇಕು.  ನಗದು ಹಣ ಅಥವಾ ಚೆಕ್, ಡಿಡಿಯನ್ನು ಈ ಕೆಳಕಂಡ ಖಾತೆಗೆ ಮಾತ್ರ ಸಂದಾಯ ಮಾಡಬೇಕು.

TV23 KANNADA

INDIAN BANK

DR||RAJKUMAR ROAD

RAJAJINAGAR BRANCH

A/C NO: 7274136392

IFSC CODE: IDIB000R526

 

ಯಾವುದೇ ವ್ಯಕ್ತಿ ಸಂಸ್ಥೆ ಅಥವಾ ಇಲಾಖೆಗಳಿಂದ ವರದಿಗಾರರು ತಮ್ಮ ಹೆಸರಿಗೆ ಡಿಡಿ ಅಥವಾ ಚೆಕ್ ಪಡೆಯುವಂತಿಲ್ಲ. TV23 KANNADA ಹೆಸರಿಗೆ ಮಾತ್ರ ಪಡೆಯಬೇಕು

ಈ ಮೇಲ್ಕಂಡ ಎಲ್ಲಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದು ಪತ್ರಿಕಾ ಧರ್ಮ ಪಾಲಿಸುವುದು, ಪತ್ರಿಕೋದ್ಯಮದಲ್ಲಿ ಬೆಳೆಯುವುದು ಆದ್ಯ ಕರ್ತವ್ಯವಾಗಿದ್ದು ನಿಮ್ಮ ಭವಿಷ್ಯವು TV23 KANNADA ಗೆ ಬೆಳೆದು ಓರ್ವ ಅತ್ಯುತ್ತಮ ಪತ್ರಕರ್ತನಾಗಿ ಈ ನಾಡಿನ ಸೇವೆ ಮಾಡಲು ಉತ್ತಮ ಕಾಲ ಕೂಡಿ ಬರಲೆಂದು ಹಾರೈಸುತ್ತೇವೆ

ಕನಸಿನ ಭಾರತ

ಕನಸಿನ ಭಾರತ ವರದಿಗಾರರು ಕಡ್ಡಾಯವಾಗಿ ಈ ಕೆಳಗಿನ ನಿಯಮಗಳನ್ನು ಪಾಲಿಸಲೇಬೇಕು.

  1. 1. ಕನಸಿನ ಭಾರತ ವೆಬ್ ಸೈಟ್‌ಗೆ ಮತ್ತು ಪತ್ರಿಕೆಗೆ ಕಳುಹಿಸುವ ಫೋಟೋ ಸುದ್ದಿಗಳನ್ನು ವಾಟ್ಸಪ್ ನಂಬರ್ 9343996622 ಅಥವಾ kanasinabharath@gmail.com ಗೆ ಮಾತ್ರ ಕಳುಹಿಸಬೇಕು.
  2. 2. ಸುದ್ದಿಯನ್ನು ಬರೆಯುವಾಗ ಹೆಡ್ ಲೈನ್ ಮತ್ತು ಸುದ್ದಿ ವಿವರಣೆಯ ಜೊತೆಗೆ ಸಂಬAಧಿಸಿದ ಫೋಟೋ ಇರಬೇಕು.
  3. 3. ಸುದ್ದಿಯನ್ನು ಸಂಜೆ ಐದು ಗಂಟೆಯ ಒಳಗಾಗಿ ಕಳುಹಿಸಬೇಕು.
  4. 4. ತನಿಖಾ ಸುದ್ದಿಗಳು (Investigative news) ಮಾಡಬೇಕಾದರೆ ಸಂಪಾದಕರ ಪೂರ್ವಾನುಮತಿ ಪಡೆಯಬೇಕು.
  5. 5. ದಿನಕ್ಕೆ ಒಂದು ಅಥವಾ ತಿಂಗಳಿಗೆ 20 ಆದರೂ ಸುದ್ದಿಗಳನ್ನು ಕಳುಹಿಸಬೇಕು.
  6. 6. ಸುದ್ದಿಯ ಜೊತೆಗೆ ಜಾಹೀರಾತು, ವಾರ್ಷಿಕ ಅಥವಾ ಅಜೀವ ಸದಸ್ಯತ್ವ ಮಾಡಿಸುವುದು ಕಡ್ಡಾಯವಾಗಿರುತ್ತದೆ.
  7. 7. ಪತ್ರಿಕೆ, ಮಾಹಿತಿ ಇತ್ಯಾದಿಗಳಿಗಾಗಿ 080-23100700 ಸಂಖ್ಯೆಗೆ ಬೆಳಗ್ಗೆ 10 ಗಂಟೆಯಿAದ ಸಂಜೆ 5:30 ರ ವರೆಗೆ ಕರೆ ಮಾಡಿ ಮಾಹಿತಿ ಪಡೆಯಬಹುದು.
  8. 8. ಜಾಹೀರಾತು, ಸದಸ್ಯತ್ವ ಮಾಡಿಸುವುದು ಇತ್ಯಾದಿಗಳ ಬಗ್ಗೆ ಮ್ಯಾನೇಜರ್ 9148820080 ನಂಬರ್‌ಗೆ ಕರೆ ಮಾಡಿ ಚರ್ಚಿಸಬಹುದು.
  9. 9. ಸುದ್ದಿ ಮಾಡುವ ಕುರಿತು ತನಿಖಾ ಸುದ್ದಿಗಳು, ಕಾನೂನು ಸಮಸ್ಯೆಗಳು, ಸುದ್ದಿ ಮಾಡುವಾಗ ಆಗುವ ಸಮಸ್ಯೆಗಳು, ಅಧಿಕಾರಿಗಳು ಅಥವಾ ರಾಜಕಾರಣಿಗಳು ಮತ್ತು ಪ್ರಭಾವಿಗಳ ಜೊತೆ ಮಾತನಾಡಬೇಕಾದ ಸಂದರ್ಭದಲ್ಲಿ, ಇತ್ಯಾದಿ ವಿಷಯಗಳಿಗೆ ಸಂಬAಧಿಸಿದAತೆ ಸಂಪಾದಕರ ದೂರವಾಣಿ 9916963121 ನಂಬರ್‌ಗೆ ಕರೆ ಮಾಡುವುದು.
  10. 10. ಕನಸಿನ ಭಾರತ ಪ್ರೈ.ಲಿ. ಮಾಧ್ಯಮ ಸಂಸ್ಥೆಯಾಗಿದ್ದು ಬೇರೆ ಯಾವುದೇ ರೀತಿಯ ವ್ಯವಹಾರ ನಡೆಸುವುದಿಲ್ಲ. ವರದಿಗಾರರು ಪರಸ್ಪರ ನಡೆಸುವ ವ್ಯವಹಾರ, ಮಾತುಕತೆ, ಒಪ್ಪಂದಗಳಿಗೆ ಕಂಪನಿ ಜವಾಬ್ದಾರಿಯಾಗುವುದಿಲ,್ಲ ಇಂತಹ ಅನುಮಾನಗಳು ನಕಲಿ ಪತ್ರಕರ್ತರು ಮತ್ತು ಮಾಜಿ ಪತ್ರಕರ್ತರ ಬಗ್ಗೆ 9353020720 ನಂಬರ್ ಗೆ ಕರೆ ಮಾಡಿ ದೂರು ನೀಡಬಹುದು. ಜೊತೆಗೆ ವರದಿಗಾರರು ಜಾಗರೂಕರಾಗಿರಬೇಕು.
  11. 11. ಕನಸಿನ ಭಾರತಕ್ಕೆ ಬರುವ ಜಾಹೀರಾತು ಹಣ, ಸದಸ್ಯತ್ವದ ಹಣ ಇತ್ಯಾದಿ ಹಣವನ್ನು ನೇರವಾಗಿ ಫೋನ್ ಪೇ ಅಥವಾ ಗೂಗಲ್ ಪೇ ಸೇರಿದಂತೆ ಯಾವುದೇ ಯುಪಿಐ ಪೇಮೆಂಟ್ ಅನ್ನು 9916963121 ನಂಬರ್ ಗೆ ಮಾತ್ರ ಮಾಡಬೇಕು. ಸಂದಾಯವಾದ ಸ್ಕ್ರೀನ್ ಶಾಟ್ ಅನ್ನು 9353020720 ನಂಬರ್‌ಗೆ ಕಳುಹಿಸಬೇಕು. ಯಾವುದೇ ಚೆಕ್ ಅಥವಾ ಡಿಡಿ ಯನ್ನು “ಕನಸಿನ ಭಾರತ”(KANASINA BHARATHA)  ಹೆಸರಿಗೆ ಮಾತ್ರ ಪಡೆಯಬೇಕು.  ನಗದು ಹಣ ಅಥವಾ ಚೆಕ್, ಡಿಡಿಯನ್ನು ಈ ಕೆಳಕಂಡ ಖಾತೆಗೆ ಮಾತ್ರ ಸಂದಾಯ ಮಾಡಬೇಕು.

“KANASINA BHARATHA”

STATE BANK OF INDIA

RAJAJINAGAR  4TH BLOCK

A/C NO : 40078901279

IFSC CODE:SBIN0040323

 

ಯಾವುದೇ ವ್ಯಕ್ತಿ ಸಂಸ್ಥೆ ಅಥವಾ ಇಲಾಖೆಗಳಿಂದ ವರದಿಗಾರರು ತಮ್ಮ ಹೆಸರಿಗೆ ಡಿಡಿ ಅಥವಾ ಚೆಕ್ ಪಡೆಯುವಂತಿಲ್ಲ. ಕನಸಿನ ಭಾರತ ಹೆಸರಿಗೆ ಮಾತ್ರ ಪಡೆಯಬೇಕು

ಈ ಮೇಲ್ಕಂಡ ಎಲ್ಲಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದು ಪತ್ರಿಕಾ ಧರ್ಮ ಪಾಲಿಸುವುದು, ಪತ್ರಿಕೋದ್ಯಮದಲ್ಲಿ ಬೆಳೆಯುವುದು ಆದ್ಯ ಕರ್ತವ್ಯವಾಗಿದ್ದು ನಿಮ್ಮ ಭವಿಷ್ಯವು ಕನಸಿನ ಭಾರತದೊಂದಿಗೆ ಬೆಳೆದು ಓರ್ವ ಅತ್ಯುತ್ತಮ ಪತ್ರಕರ್ತನಾಗಿ ಈ ನಾಡಿನ ಸೇವೆ ಮಾಡಲು ಉತ್ತಮ ಕಾಲ ಕೂಡಿ ಬರಲೆಂದು ಹಾರೈಸುತ್ತೇವೆ.

ಜಾಹೀರಾತು : ಜಾಹೀರಾತು ಮಾಧ್ಯಮದ ಜೀವಾಳ. ಅಭಿವೃದ್ಧಿ ಜೊತೆಗೆ ವಸ್ತು, ವ್ಯಕ್ತಿ, ಸಂಸ್ಥೆ ವಿಚಾರಗಳ ಪ್ರಚಾರವು ಅತ್ಯಂತ ಅವಶ್ಯಕತೆ ಇದೆ. ಯಾವುದೇ ಉತ್ಪನ್ನದ ಜಾಹೀರಾತು ಇಲ್ಲದೇ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಾಗಲಾರದು ಈ ಕಾರಣದಿಂದ ಸರ್ಕಾರ ಮತ್ತು ಕಂಪನಿಗಳು, ರಾಜಕಾರಣಿಗಳು ಸಂಘ-ಸಂಸ್ಥೆಗಳು ಸಾಕಷ್ಟು ಜಾಹೀರಾತನ್ನು ನೀಡುತ್ತಿದ್ದು ಆದರೆ ಎಲ್ಲ ಮಾಧ್ಯಮಕ್ಕಿಂತ ಮುದ್ರಣ ಮಾಧ್ಯಮದ ಜಾಹೀರಾತು ವಿಶ್ವಾರ್ಹತೆ ಮತ್ತು ಪರಿಣಾಮದಿಂದ ಕೂಡಿರುತ್ತದೆ ಅದರಲ್ಲೂ ಕನಸಿನ ಭಾರತ ಯಾವುದೇ ಜಾತಿ ಧರ್ಮ ಮತ್ತು ರಾಜಕೀಯ ಪಕ್ಷದ ಪ್ರತೀಕ ಅಲ್ಲದೇ ದೇಶದ ಅದರಲ್ಲೂ ದೇಶಾಭಿಮಾನ ಬೆಳೆಸುವ ಮಾದ್ಯಮ ಆಗಿರುವುದರಿಂದ ಕುಟುಂಬದ ಪತ್ರಿಕೆ ಕೂಡ ಆಗಿರುವುದರಿಂದ ಹೆಚ್ಚು ಜನರಿಗೆ ಜಾಹೀರಾತು ತಲುಪುತ್ತದೆ. ಆಧುನಿಕ ಯುಗದ ಜಾಹೀರಾತು ಆಯಾಮಗಳನ್ನು ಕೂಡ ಪರಿಚಯಿಸುತ್ತದೆ, ಹೊಸ ದೃಷ್ಟಿಕೋನದಲ್ಲಿ ಪ್ರಚಾರಕ್ಕೆ ಸಲಹೆ-ಸೂಚನೆ ಕೂಡ ಕೊಡಲಾಗುತ್ತದೆ.

ಆರೋಗ್ಯ,ಕಾನೂನು,ಲೇಖನ ಮತ್ತು ದೇಶಾಭಿಮಾನ ಬೆಳೆಸುವಂತಹ ಮಾಧ್ಯಮವು ಸಾರ್ವಕಾಲಿಕ ಜನರ ಮೆಚ್ಚುಗೆ ಮತ್ತು ಸಂಗ್ರಹವಾಗುವುದರಿಂದ ಜಾಹೀರಾತು ಹೆಚ್ಚು ಜನರಿಗೆ ತಲುಪಿ ಉತ್ತಮ ಪಲಿತಾಂಶ ಬರುತ್ತದೆ. ಈಗಾಗಲೇ 8 ವರ್ಷದಿಂದ ಪತ್ರಿಕೆಯು ಉಚಿತವಾಗಿ ಲಕ್ಷಾಂತರ ಜನರಿಗೆ ತಲುಪುತ್ತಿದೆ. ಆಸಕ್ತ ಓದುಗರು, ಗ್ರಂಥಾಲಯಗಳು, ಶಾಲಾ_ಕಾಲೇಜು, ಸಾರ್ವಜನಿಕ ಸ್ಥಳಗಳಿಗೆ ಉಚಿತವಾಗಿ ನೀಡುತ್ತಾ ಬಂದಿದ್ದೇವೆ, ಈಗ ಇನ್ನು ಒಂದು ಹೆಜ್ಜೆ ಮುಂದೆ ಸಾಗಿ 16,000 ಅಜೀವ ಸದಸ್ಯತ್ವ ಮತ್ತು ರೂ.1500 ಪಡೆದು ವಾರ್ಷಿಕ ಚಂದಾದಾರನಾಗಿಸಿ, ಕರ್ನಾಟಕ ಮನೆ ಮಾತನಾಗಿಸಲು ಕನಸಿನ ಭಾರತ ಎಲ್ಲ ರೀತಿಯ ಸಿದ್ದತೆಯನ್ನು ಮಾಡಿಕೊಂಡಿದೆ. ಈಗಾಗಲೇ ಪತ್ರಿಕೆ 20ಕ್ಕೂ ಅಧಿಕ ವೆಬ್ ತಾಣದಲ್ಲಿ ಪ್ರಕಟಗೊಳ್ಳುತ್ತಿದ್ದು, ಸೋಷಿಯಲ್ ಮೀಡಿಯಾದಲ್ಲೂ ಪತ್ರಿಕೆ ಅತ್ಯಂತ ಕ್ರಿಯಾಶೀಲವಾಗಿದ್ದರಿಂದ ಜಾಹೀರಾತು ಅತ್ಯಂತ ಹೆಚ್ಚು ಜನರಿಗೆ ತಲುಪುತ್ತದೆ. ಪತ್ರಿಕೆ ಬೆಳವಣೆಗೆಗೆ ಮತ್ತು ತಮ್ಮ ಪ್ರಚಾರಕ್ಕಾಗಿ ದಯವಿಟ್ಟು ಜಾಹೀರಾತು ನೀಡಿ ಸಹಕರಿಸಿ.

Advertisement Rate Card

ಅರಿಕೆ: ಕನಸಿನ ಭಾರತ ಸತತ 12ವರ್ಷದಿಂದ ನಾಡಿನ ಜನತೆಗೆ ಕಾನೂನು, ಆರೋಗ್ಯ, ದೇಶಾಭಿಮಾನದಂತಹ ಹಲವಾರು ವಿಷಯಗಳೊಂದಿಗೆ ಸುದ್ಧಿ,ಮನರಂಜನೆ,ಜ್ಞಾನ ಮತ್ತು ಮಾಹಿತಿಯನ್ನು ಪ್ರಚಾರ ಮಾಡುತ್ತಾ ಬಂದಿದೆ. “ ಆತ್ಮಸಾಕ್ಷಿಗಳ ಶುದ್ಧಿಕರಣ,ರಾಜಕೀಯ ಸ್ವಚ್ಚ ಭಾರತ, ಬಲಿಷ್ಠ,ಕ್ರಿಯಾಶೀಲ,ಅಭಿವೃದ್ಧಿಯ, ಸಮಾನತೆಯ ದೇಶ ಕಟ್ಟಲು ಕನಸಿನ ಭಾರತ ದೃಡ ನಿರ್ಧಾರದೊಂದಿಗೆ ನಾಡಿನ ಯುವ ಜನರ ಸಮೂಹ. ಮಾಹಿತಿ, ಜಾಗೃತಿ,ದೇಶಾಭಿಮಾನ ಮತ್ತು ಸಕಾರಾತ್ಮ ಸುದ್ಧಿಗಳ ಮೂಲಕ ಜನರ ಅಭಿವೃದ್ಧಿ ಸಾಧ್ಯ.ಕನಸಿನ ಭಾರತವು ಸಮಾಜಮುಖಿ ಕಾರ್ಯದಲ್ಲಿ ತನ್ನನ್ನು ತೊಡಗಿಸಿಕೊಂಡು, ಹಲವಾರು ಸಮಾಜ ಮುಖಿ ಕಾರ್ಯಗಳನ್ನು ಮಾಡುತ್ತಾ ಬಂದಿದೆ ಈ ಕಾರಣಕ್ಕಾಗಿ ಜನರನ್ನು ಒಂದುಗೂಡಿಸಲು ಅಖಿಲ ಭಾರತ ರಕ್ಷಣಾ ವೇಧಿಕೆ ಕಟ್ಟಿ ಬೆಳೆಸುತ್ತಿದ್ದೇವೆ. ಕನಸಿನ ಭಾರತ ಪತ್ರಿಕೆ ಸಮೂಹವು ಸಕಾರಾತ್ಮ ಸುದ್ದಿ, ಸ್ಥಳೀಯ ಸಮಸ್ಯೆಗಳಿಗೆ ಮತ್ತು ಪ್ರತಿಭೆಗಳಿಗೆ ಹೆಚ್ಚಿನ ಒತ್ತು ಕೊಡುತ್ತದೆ. ಭ್ರಷ್ಠಾಚಾರ ಯಾವುದೇ ಹಂತದಲ್ಲಿ ಯಾವುದೇ ರೂಪದಲ್ಲೂ ಇದ್ದರೂ ನಾವು ಸಹಿಸುವುದಿಲ್ಲ. ರಾಜಕೀಯ, ಆಡಳಿತ ವ್ಯವಸ್ಥೆ, ಸಾರ್ವಜನಿಕ ಖಾಸಗಿ ಅಥವಾ ಸರ್ಕಾರಿ ವಲಯಗಳು, ಸಮಾಜಸೇವೆ ಹೆಸರಿನಲ್ಲಿ ನಡೆಯುವ ಅನ್ಯಾಯಗಳು, ಪತ್ರಿಕೆ/ಮಾಧ್ಯಮದ ಹೆಸರನಲ್ಲಿ ನಡೆಯುವ ಅನ್ಯಾಯಗಳು ಇತ್ಯಾದಿ ಇತ್ಯಾದಿ ಯಾವುದೇ ರೀತ್ಯ ಅನ್ಯಾಯ ಅಥವಾ ಜನರಿಗೆ ತೊಂದರೆ ಕೊಡುವ ಚಟುವಟಿಕೆ ಅಥವಾ ವ್ಯಕ್ತಿಯ ಜನ್ಮವನ್ನು ಜಾಲಾಡಿಸಿ,ಸುದ್ಧಿ ಮಾಡುತ್ತೇವೆ,ಯಾವುದೇ ವ್ಯಕ್ತಿ,ವ್ಯವಸ್ಥೆ ಅಥವಾ ಆಶೆಗಳಿಗಾಗಿ ಸುದ್ಧಿಗೆ ಅನ್ಯಾಯ ಮಾಡುವುದಿಲ್ಲ. ಸಾರ್ವಜನಿಕರು ಅಥವಾ ನಮ್ಮ ವರದಿಗಾರರು ಸುದ್ಧಿಗಳನ್ನು ಕೊಡಬಹುದು. ಒಳ್ಳೆಯದನ್ನು ಬೆಳೆಸುವುದರ ಜೊತೆಗೆ ಕೆಟ್ಟದನ್ನು ಕಿತ್ತು ಹಾಕುತ್ತೇವೆ. ಯಾರೇ ಆದರೂ ಪರೀಕ್ಷೆ ಮಾಡಲು ನಮ್ಮ ಸಮಯ ಹಾಳು ಮಾಡಬೇಡಿ. ಸತ್ಯ ಇದ್ದರೆ ಕಡಿತ ನಮ್ಮ ಬೆಂಬಲ ಇರುತ್ತದೆ. ಭಾರತದಲ್ಲಿ ಇರುವ ಭ್ರಷ್ಠಾಚಾರವನ್ನು ತೊಳೆದು ಸುಂದರ ಬಲಿಷ್ಠ,ಸಮಾನತೆಯ ದೇಶವನ್ನು ಕಟ್ಟೋಣ. ಬನ್ನಿ ಕೈ ಜೋಡಿಸಿ, ಕಾಲ ಎಳೆಯಬೇಡಿ.

ರಮೇಶ.ಎಸ್.ಜಿ ಎಂ.ಎ, ಪಿ.ಜಿ.ಡಿ.ಕೆ.ಜೆ 
ಸಂಪಾದಕರು.

Watch Video

ಕನಸಿನ ಭಾರತ ಸತತ 12 ವರ್ಷದಿಂದ ನಾಡಿನ ಜನತೆಗೆ ಕಾನೂನು, ಆರೋಗ್ಯ, ದೇಶಾಭಿಮಾನದಂತಹ ಹಲವಾರು ವಿಷಯಗಳೊಂದಿಗೆ ಸುದ್ಧಿ,ಮನರಂಜನೆ,ಜ್ಞಾನ ಮತ್ತು ಮಾಹಿತಿಯನ್ನು ಪ್ರಚಾರ ಮಾಡುತ್ತಾ ಬಂದಿದೆ. “

Download

ಕನಸಿನ ಭಾರತ

ಕನಸಿನ ಭಾರತ ಮಾಧ್ಯಮ ಕ್ಷೇತ್ರದಲ್ಲಿ ಸತತ 12 ವರ್ಷದಿಂದ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಾ ಬಂದಿದ್ದು, ಹಲವಾರು ವರದಿಗಾರರು ಮತ್ತು ಬರಹಗಾರರನ್ನು ಸೃಷ್ಠಿ ಮಾಡಿದ ಹೆಮ್ಮೆ ಈ ಸಂಸ್ಥೆಗೆ ಇದೆ. ಇಂತಹ ಸಂಸ್ಥೆಯ ಹುಟ್ಟಿಗೆ ರಮೇಶ ಎಸ್.ಜಿ ಮತ್ತು ಗಂಗಾಧರ್.ಎಸ್ ಪಾತ್ರ ಅತ್ಯಂತ ಅಮೂಲ್ಯವಾಗಿದೆ.

ರಮೇಶ ಎಸ್ .ಜಿ

ರಮೇಶ್ ಎಸ್ .ಜಿ  ಮೂಲತಃ ಬೆಳಗಾವಿ ಜಿಲ್ಲೆಯವರಾಗಿದ್ದು ಪ್ರಾಥಮಿಕ ಶಿಕ್ಷಣ  ಗೋಕಾಕನಲ್ಲಿ, ಉನ್ನತ ಶಿಕ್ಷಣ ಧಾರವಾಡದಲ್ಲಿ ಮುಗಿಸಿ ಬೆಂಗಳೂರಿಗೆ ಬಂದು ಕರ್ನಾಟಕ ಸಾಂಸ್ಕೃತಿಕ ಪ್ರತಿಷ್ಠಾನ, ಕರ್ನಾಟಕ ವೀರಶೈವ ಪ್ರತಿಷ್ಠಾನ ಸ್ವಯಂ ಸೇವಕರಾಗಿ, ಹಲವಾರು ಓಉಔ ಗಳಲ್ಲಿ ಸಲಹೆಗಾರರಾಗಿ, ಬೇರೆ ಬೇರೆ ಮಾಧ್ಯಮಗಳಲ್ಲಿ ವರದಿಗಾರರಾಗಿ, ಬರಹಗಾರರಾಗಿ ಸೇವೆ ಸಲ್ಲಿಸುತ್ತಾ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಮೈಸೂರಿನಲ್ಲಿ ಎಂ.ಎ. ಪತ್ರಿಕೋಧ್ಯಮ ಮತ್ತು ಸಮೂಹ ಸಂವಹನದಲ್ಲಿ ಉನ್ನತ ಪದವಿ, ಶಿವಮೊಗ್ಗ ವಿಶ್ವವಿದ್ಯಾನಿಲಯದಲ್ಲಿ ಪಿ.ಜಿ ಕನ್ನಡ ಪತ್ರಿಕೊಧ್ಯಮ ಓದಿ ಅಪಾರ ಜ್ಞಾನ ಹೊಂದಿದ್ದು 2011 ರಲ್ಲಿ ಕನಸಿನ ಭಾರತ ಮಾಸ ಪತ್ರಿಕೆಯ ಸಂಪಾದಕರಾಗಿ , ಕನಸಿನ ಭಾರತ ಕಂಪನಿಯ ಮಾಲೀಕರಾಗಿ ಮತ್ತು ಕನಸಿನ ಭಾರತ ,ಮಾಧ್ಯಮಸ ಮುಖ್ಯಸ್ಥರಾಗಿ ಸೇವೆಸಲ್ಲಿಸುತ್ತಾ ಕರ್ನಾಟಕ ಪ್ರೆಸ್ ಕ್ಲಬ್ ಸೇರಿದಂತೆ ಹಲವಾರು ಸಂಘ ಸಂಸ್ಥೆಗಳು, NGO ಗಳಲ್ಲಿ ವಿವಿಧ ಹುದ್ದೆಗಳನ್ನು ದಕ್ಷ ಮತ್ತು ಪ್ರಾಮಾಣಿಕತೆಯಿಂದ ನಿರ್ವಹಿಸಿ ವೃತ್ತಿ ಪರತೆ, ವೃತ್ತಿ ಧರ್ಮವನ್ನು ಪಾಲಿಸುತ್ತಿದ್ದಾರೆ.

ಗಂಗಾಧರ್ . ಎಸ್

ಗಂಗಾಧರ್ ಎಸ್ ಮೂಲತಃ ಬೆಂಗಳೂರಿನಲ್ಲಿ ಹುಟ್ಟಿ ಬೆಳೆದು ಶಿಕ್ಷಣವನ್ನು ಇಲ್ಲೇ ಮುಗಿಸಿ ಕರ್ನಾಟಕ ಸಾಂಸ್ಕೃತಿಕ ಪ್ರತಿಷ್ಠಾನದಲ್ಲಿ ವೃತ್ತಿ ಪ್ರಾರಂಭಿಸಿ, ಕರ್ನಾಟಕ ವೀರಶೈವ ಪ್ರತಿಷ್ಠಾನ ಸೇವಕರಾಗಿ ಕಾರ್ಯ ನಿರ್ವಹಿಸಿ, ಹಲವಾರು ಕಂಪನಿಗಳಲ್ಲಿ ಬೇರೆ ಬೇರೆ ಹುದ್ದೆಗಳಲ್ಲಿ ಸೇವೆ ಸಲ್ಲಿಸುತ್ತಾ 2011 ರಲ್ಲಿ ಕನಸಿನ ಭಾರತ ಪತ್ರಿಕೆ ಪ್ರಾರಂಭಿಸಲು ಸಹವರ್ತಿಯಾಗಿ, ಕನಸಿನ ಭಾರತ ಕಂಪನಿಯ ಸಹ ಮಾಲೀಕರಾಗಿ ಕನಸಿನ ಭಾರತ ಮಾಧ್ಯಮ ಸಂಸ್ಥೆಯಲ್ಲಿ 12 ವರ್ಷದಿಂದ ವ್ಯವಸ್ಥಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

KANASINA BHARATHA ID CARD MODAL

Kanasina bharatha and tv23 kannada id card modal

KB Front

KB Back

TV23 Front

TV23 Back